ಜೀವನ ಒಂದು ಬಯಲಾಟ
ಸೋಗಸದರಲಿ ನಮ್ಮ ಒಡನಾಟ
ಮನಗಳ ಬೆರೆಸಿರುವ ಇದೆಂತಹ ಮಾಟ
ಹಿತವಾಗಿದೆ ನಿನ್ನ ಹುಡುಗಾಟ
ನಡುವೆ ನಿನ್ನ ಕೋಪದ ಆರ್ಭಟ
ಮತ್ತೆ ತಂಪೆರೆಯುವ ನಿನ್ನ ಚೆಲ್ಲಾಟ
ಎನ್ನ ಹೃದಯದ ನೀ ಸಾಮ್ರಾಟ ...
ಆಹಾ ಆಹಾ ನನ್ನ ರಾಣಿ
ಮಾತಿನಲ್ಲಿ ನೀನು ಅರಗಿಣಿ
ಮನ ಕದ್ದಿರುವ ರಮಣಿ
ಒಮ್ಮೊಮ್ಮೆ ಏಕೆ ಹಿಡಿಯುವೆ ಗುರಾಣಿ?
ಹೇಳಿದೆ ನೀನು, ರಾಜ ನಾನು
ಇಣುಕಿ ಎನ್ನ ಹೃದಯದಿ ನೋಡು ನೀನು
ಆ ಸಿಂಹಾಸನದಿ ಕುಳಿತಿರುವುದು ನೀನಲ್ಲವೇನು?
ನಿಜವಾಗಿ ನನ್ನನಾಳುತಿರುವವಳು ನೀನೆ ಅಲ್ಲವೇನು?
ನಮ್ಮಿಬರ ಈ ಬೆಸುಗೆ
ಕಾಲ ಕರೆದೊಯ್ಯುವವರೆಗೆ
ಹೀಗೆ ಇರಲಿ ಈ ಸಲುಗೆ
ಸ್ವಲ್ಪ ಬೇವು ಸ್ವಲ್ಪ ಬೆಲ್ಲದ ಹಾಗೆ
No comments:
Post a Comment